Friday, October 22, 2021

ಮಾಜಿ ಕೇಂದ್ರ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ ನಿಧನ

Must Read
- Advertisement -

ಬೆಳಗಾವಿ ಮೇ, 21- ಮಾಜಿ ಕೇಂದ್ರ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಬಾಬಾಗೌಡ ಪಾಟೀಲ ಅವರು ಹಲವು ದಿನಗಳಿಂದ ಅನಾರೋಗ್ಯ ಉಂಟಾಗಿತ್ತು. ನಗರದ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರು ಎಳೆದಿದ್ದಾರೆ.

- Advertisement -

ಚಿಕ್ಕ ಬಾಗೇವಾಡಿಯವರಾದ ಇವರು ಎರಡು ಬಾರಿ ಶಾಸಕರು ಮತ್ತು ಒಂದು ಬಾರಿ ಸಂಸದರಾಗಿದ್ದರು. ಅಟಲ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

- Advertisement -

ರೈತ ಹೋರಾಟದ ಬಹುದೊಡ್ದ ಕೊಂಡಿ ಕಳಚಿದಂತಾಗಿದೆ. ಇವರ ನಿಧನದಿಂದ ರೈತರಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ.

ಸಂತಾಪ:- ರೈತ ಹೋರಾಟಗಾರ, ಮುತ್ಸದ್ದಿ ನಾಯಕ, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ನಿಧನರಾಗಿದ್ದು ಬಹು ದೊಡ್ದ ಆಘಾತವನ್ನುಂಂಟು ಮಾಡಿದೆ.

ಇವರ ನಿಧಾನದಿಂದ ರೈತ ಹೋರಾಟಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ, ರೈತ ಮುಖಂಡರಾದ ರುದ್ರಪ್ಪಣ್ಣ ಮುಕಾಶಿ, ಕಲ್ಯಾಣರಾವ ಮುಚಳಂಬಿ, ಬಿ.ಎಲ್. ಪಾಟೀಲ, ಚಂದ್ರಗೌಡ ಪಾಟೀಲ , ಮಲ್ಲಿಕಾರ್ಜುನ ವಾಲಿ, ಗಂಗಪ್ಪಾ ಗಣಾಚಾರಿ, ಪಾರ್ವತಿ ಕಳಸಣ್ಣವರ ಪಾರ್ಥಿಸಿದ್ದಾರೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -