Monday, October 25, 2021

ಸಾಗರೋತ್ತರ ” ವ್ಯಾಕ್ಸಿನ್ ಪ್ರವಾಸ”

Must Read
- Advertisement -

ನವದೆಹಲಿ ಮೇ., ೧೯- ಸಾಗರೋತ್ತರ ವ್ಯಾಕ್ಸಿನ್ ಪ್ರವಾಸದ ಉದ್ದೇಶದಿಂದ ಅನೇಕ ದೇಶಗಳು ತಮ್ಮ ದೇಶಕ್ಕೆ ಬರಲು ಭಾರತೀಯರಿಗೆ ಅನುಮತಿ ನೀಡಿವೆ. ಇಗ ಈ ಸಾಲಿಗೆ ರಷ್ಯಾ ಕೂಡ ಸೇರಿದೆ.
ಸಾಗರೋತ್ತರ ” ವ್ಯಾಕ್ಸಿನ ಪ್ರವಾಸ” ಸದ್ಯದ ಹೊಸ ಟ್ರೆಂಡ್ ಆಗಿದೆ. ಲಾಕ್ ಡೌನ್ ನಲ್ಲಿ ಎಲ್ಲರೂ ಮನೆಯಲ್ಲಿ ಬಂಧಿಯಾಗಿರುವ ಇಂತಹ ಸಂದರ್ಭದಲ್ಲಿ ಪ್ರವಾಸವಂತೂ ಕನಸಿನ ಮಾತಾಗಿದೆ. ಆದರೆ ಕೈ ತುಂಬಾ ದುಡ್ಡಿದ್ದರೆ, ವಿದೇಶ ಪ್ರವಾಸ ಮಾಡಬಹುದು. ಕೊರೊನಾ ಸೊಂಕಿನಿಂದ ಪಾರಾಗಲು ಅಲ್ಲಿಯೇ ಲಸಿಕೆ ಸಹ ಪಡೆಯಬಹುದು. ಈಗ ಭಾರತದಲ್ಲಿ ಸಾಗರೋತ್ತರ ಲಸಿಕೆ ಪ್ರವಾಸೋದ್ಯಮಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅದಕ್ಕಾಗಿ ಒಂದು ನೆಗೆಟಿವ್ ಪಿಸಿಆರ‍್ ರಿಪೋರ್ಟ್ ಇದ್ದರೆ ಸಾಕು, ಅಲ್ಲಿಗೆ ತಲುಪಿದ ಮೇಲೆ ಕ್ವಾರಂಟೈನ್ ಆಗುವ ಅಗತ್ಯ ಸಹ ಇಲ್ಲ.
ರಷ್ಯಾದಲ್ಲಿ ಸ್ಪುಟ್ನಿಕ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಬಯಸುವವರಿಗೆ ದೆಹಲಿ ಮೂಲದ ಟ್ರ‍್ಯಾವಲ್ ಏಜೆನ್ಸಿಯೊಂದು ೨೪ ದಿನಗಳ ಮಾಸ್ಕೊ ಪ್ಯಾಕೇಜ್ ಪ್ರವಾಸವನ್ನು ಆಯೋಜಿಸಿರುವುದು ತಿಳಿದು ಬಂದಿದೆ. ೨೧ ದಿನಗಳ ಈ ವ್ಯಾಕ್ಸಿನ ಪ್ರವಾಸದಲ್ಲಿ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಕೊಡಿಸುತ್ತದೆ ಮತ್ತು ಈ ಎರಡು ಡೋಸ್ ಲಸಿಕೆಯ ಮದ್ಯದ ಸಮಯದಲ್ಲಿ ರಷ್ಯಾದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಾಗುವುದು ಎಂದು ಹೇಳಿಕೊಂಡಿದೆ. ಇದಕ್ಕೆ ಅದು ಪ್ರತಿಯೊಬ್ಬರಿಗೆ ೧.೩ ಲಕ್ಷ ರೂಪಾಯಿ ನಿಗದಿ ಪಡಿಸಿದೆ ಎಂದು ತಿಳಿದುಬಂದಿದೆ.
ಮೇ ೧೫ ಕ್ಕೆ ಗುರುಗ್ರಾಮದಿಂದ ಮೊದಲ ೩೦ ಜನರ ತಂಡ ರಷ್ಯಾಗೆ ತಲುಪಿ, ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಮೇ ೨೯ಕ್ಕೆ ಎರಡನೇ ತಂಡ ಹೊರಡಲು ಸಜ್ಜಾಗಿದೆ ಎಂದು ಏಜೆನ್ಸಿ ಹೇಳಿಕೊಂಡಿದೆ.
ಈ ಹಿಂದೆ ಅಮೇರಿಕಾದಲ್ಲಿ ಫೈಜರ‍್ ಲಸಿಕೆ ಲಭ್ಯವಾದ ಕೂಡಲೆ ೧.೭ ಲಕ್ಷ ವೆಚ್ಚದಲ್ಲಿ ೪ ದಿನಗಳ ವ್ಯಾಕ್ಸಿನ ಪ್ರವಾಸ ಆಯೋಜಿಸುವುದಾಗಿ ಮುಂಬೈನ ಒಂದು ಟೂರಿಸ್ಟ ಏಜನ್ಸಿ ಹೇಳಿತ್ತು. ವ್ಯಾಕ್ಸಿನ ಪ್ರವಾಸೋದ್ಯಮಕ್ಕೆ ಮೊದಲು ಅವಕಾಶ ಮಾಡಿಕೊಟ್ಟ ದೇಶ ದುಬೈ. ಆದರೆ ಈಗ ದುಬೈ ಸೇರಿ ಹಲವು ರಾಷ್ಟ್ರಗಳಲ್ಲಿ ಭಾರತೀಯರ ಪ್ರವೇಶ ನಿಷೇಧಿಸಲಾಗಿದೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -