Saturday, October 23, 2021

ಜಿಲ್ಲೆಯಲ್ಲಿ ಹೆಚ್ಚಿದ ಸೋಂಕು : ಬಿಗಿ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ

Must Read
- Advertisement -

ಬೆಳಗಾವಿ ಮೇ., 19- ಜಿಲ್ಲೆಯಲ್ಲಿ 3-4 ದಿನಗಳಿಂದ ಸಾವಿರ, ಎರಡೂ ಸಾವಿರಕ್ಕೂ ಹೆಚ್ಚು ಪ್ರತಿ ದಿನ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಏಚ್ಚೆತ್ತಿರು ಜಿಲ್ಲಾಡಳಿತ ಬಿಗಿ ಕ್ರಮಕ್ಕೆ ಮುಂದಾಗಿದೆ.

ಇಂದಿನಿಂದಲೇ ಕಠಿಣ ಕ್ರಮಕ್ಕೆ ಮುಂದಾಗಿರು ಜಿಲ್ಲಾಡಳಿತ ಬೆಳಗಾವಿ ಪ್ರವೇಶದ ಪ್ರಮುಖ ರಸ್ತೆಗಳಲ್ಲಿ ಪೊಲೀಸರಿಂದ ತಪಾಸಣೆ ನಡೆಸಿ, ಅವಶ್ಯಕತೆ ಇರುವವರಿಗೆ ಮಾತ್ರ ಒಳಗೆ ಬೀಡುತ್ತಿದ್ದಾರೆ. ನಿನ್ನೆಗಿಂತ ಇಂದು ಬಿಗಿ ಕ್ರಮ ಹೆಚ್ಚಾಗಿದೆ. ಅನೇಕ ರಸ್ತೆಗಳನ್ನು ಬಂದ ಮಾಡಲಾಗಿದೆ.

- Advertisement -

ಇನ್ನೂ ವಾರಾಂತ್ಯದ ಕಠಿಣ ಲಾಕ್‍ಡೌನ್ ಅನ್ನೂ ಘೋಷಿಸಿರುವ ಜಿಲ್ಲಾಡಳಿತ ಮೇ 22ರ ಬೆಳಿಗ್ಗೆ 6 ಗಂಟೆಯಿಂದ ಮೇ. 24 ರ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್‍ಡೌನ್ ಮಾಡಿದೆ. ಈ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತೆರಳಲು, ಅಗತ್ಯ ವಸ್ತುಗಳಾದ ಹಾಲು, ಔಷಧ ಪೂರೈಕೆ ಮತ್ತು ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ.

- Advertisement -

ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ದ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 2118 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಗುಣಮುಖರಾಗಿ ಬಿಡುಗಡೆಯಾದವರು ಕೇವಲ 713 ಜನ ಮಾತ್ರ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 15164ಕ್ಕೆ ಏರಿಕೆಯಾಗಿದೆ. ನಿನ್ನೆ ಜಿಲ್ಲೆಯಲ್ಲಿ 5 ಜನ ಕೊರೊನಾಗೆ ಬಲಿಯಾಗಿದ್ದಾರೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -