Friday, October 22, 2021

1250 ಕೋಟಿ ರೂಪಾಯಿಯ ವಿಷೇಶ ಪ್ಯಾಕೇಜ್ ಘೋಷಿಸಿದ ಸಿ.ಎಂ.

Must Read
- Advertisement -

ಬೆಂಗಳೂರು ಮೇ., 19- ಕೊರೊನಾ ಅಟ್ಟಹಾಸಕ್ಕೆ ನಲುಗಿದ ಕರ್ನಾಟಕ ಸರಕಾರ ರಾಜ್ಯದಲ್ಲಿ ಲಾಕ್‍ಡೌನ್ ಘೋಷಿಸಿತ್ತು, ಇದರಿಂದ ಅನೇಕ ಶ್ರಮಿಕ ವರ್ಗ ಬಹಳಷ್ಟು ತೊಂದರೆಗೆ ಒಳಗಾಗಿತ್ತು. ಅವರ ಸಹಾಯಕ್ಕೆ ಮುಂದಾಗಿರುವ ಸರಕಾರ ಇಂದು 1250 ಕೋಟಿ ರೂಪಾಯಿಯ ಸಹಾಯಧನ ಘೋಷಿಸಿದೆ.
ಇಂದು ಸುದ್ದಿಗೋಷಟಿಯನ್ನು ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಶ್ರಮಿಕ ವರ್ಗದವರಿಗೆ 1250 ಕೋಟಿ ರೂಪಾಯಿಯ ಸಹಾಯಧನ ಘೋಷಣೆ ಮಾಡಿದ್ದಾರೆ. ಮತ್ತು ಲಾಕಡೌನ್ ಮುಂದುವರೆಸುವ ಬಗ್ಗೆ ಮೇ. 20 ರಂದು ಘೋಷಿಸಲಾಗುವುದು ಎಂದು ತಿಳಿಸಿದರು.
ಘೋಷಣೆಯ ಮುಖ್ಯಾಂಶಗಳು :
* ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರಗೆ 10 ಸಾವಿರ ರೂ. ಪರಿಹಾರ
* ಕಟ್ಟಡ ಕಾರ್ಮಿಕರಿಗೆ 490 ಕೋಟಿ ರೂ. ಮೀಸಲಿಡಲಾಗಿದೆ.
* ಅಸಂಗಟಿತ ಕಾರ್ಮಿಕರಿಗೆ 61 ಕೋಟಿ ರೂಪಾಯಿ.
* ರಸ್ತೆ ಬದಿ ವ್ಯಾಪಾರಸ್ಥರಿಗೆ 2 ಸಾವಿರ ರೂಪಾಯಿ
* ಕಲಾವಿಧರಿಗೆ, ಕಲಾತಂಡಗಳಿಗೆ 2000 ರೂಪಾಯಿ.
* ಹಣ್ಣು, ತರಕಾರಿ ಬೆಳೆಗಾರರಿಗೆ 10 ಸಾವಿರ ರೂ. ಸಹಾಯ ಧನ.
* ಲೈನ್ ಮ್ಯಾನ್, ಗ್ಯಾಸ ಸಿಲಿಂಡರ್ ಸಪ್ಲೈ ಮಾಡುವವರು ಪ್ರಂಟ್ ಲೈನ್ ವಾರಿಯರ್ಸ.
* ಅಟೋ ಚಾಲಕರಿಗೆ 3 ಸಾವಿರ ರೂಪಾಯಿ ಸಹಾಯಧನ.
* ಬೀದಿ ಬದಿಯ ವ್ಯಾಪಾರಿಗಳಿಗೆ 2 ಸಾವಿರ ರೂಪಾಯಿ.
* ಹೂ ಹಣ್ಣು ವರ್ತಕರಿಗೆ 3 ಸಾವಿರ ಸಹಾಯಧನ.
* ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರುಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ.
* ಕೊರೊನಾ ನಿರ್ವಹಣೆಗೆ 3-4 ದಿನಗಳಲ್ಲಿ 2500 ವೈದ್ಯರ ನೇಮಕ.
ರಾಜ್ಯದಲ್ಲಿ ಕೊರೊನಾ ಅಬ್ಬರ ಇನ್ನೂ ಮುಂದುವರೆದಿರುವದರಿಂದ ತಜ್ಞರು ಲಾಕ್‍ಡೌನ್ ಮುಂದುವರೆಸಲು ಸಲಹೆ ನೀಡಿದ್ದಾರೆ. ಅಧಿಕಾರಿಗಳು ಮತ್ತು ಸಚಿವರು, ಶಾಸಕರೂ ಲಾಕ್‍ಡೌನ್ ವಿಸ್ತರಿಸಲೂ ಆಗ್ರಹಿಸುತ್ತಿರುವುದರಿಂದ ದಿ. 23 ರಂದು ಇದರ ಬಗ್ಗೆ ನಿರ್ಧಾರ ಪ್ರಕಟಿಸಾಲುಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -