Friday, October 22, 2021

ಬೆಳಗಾವಿಯ ಖ್ಯಾತ ಗುತ್ತಿಗೆದಾರ ಡಿ.ಎಲ್.ಕುಲಕರ್ಣಿ ಕೋವಿಡ್ ಗೆ ಬಲಿ

Must Read
- Advertisement -

ಬೆಳಗಾವಿ ಮೇ, 18-  ಬೆಳಗಾವಿಯ ಖ್ಯಾತ ಗುತ್ತಿಗೆದಾರ ಶ್ರೀ ಡಿ.ಎಲ್.ಕುಲಕರ್ಣಿ (55 ವರ್ಷ ವಯಸ್ಸು)  ಅವರು ಇಂದು ಮಂಗಳವಾರ ಮುಂಜಾನೆ ಕೋವಿಡ್ ಗೆ ಬಲಿಯಾಗಿದ್ದಾರೆ.

ಅವರ ಆಕ್ಸಿಜೆನ್ ಮಟ್ಟ ಕುಸಿದಿದ್ದರಿಂದ ಕಳೆದ ಕೆಲವು ದಿನಗಳಿಂದ ಕೆ.ಎಲ್.ಇ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 10 ಗಂಟೆಗೆ ಕೊನೆಯುಸಿರೆಳೆದರು.

- Advertisement -

ಮೃತರು  ಪತ್ನಿ, ಒಬ್ಬ ಪುತ್ರ ,ಒಬ್ಬ ಪುತ್ರಿ , ಸಹೋದರರು, ತಂದೆ, ತಾಯಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

ಬೆಳಗಾವಿ ಜಿಲ್ಲಾ ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿದ್ದ ಅವರು ಅನೇಕ ಸಾಮಾಜಿಕ ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು.ಸ್ನೇಹ ಜೀವಿಯಾಗಿದ್ದ ಕುಲಕರ್ಣಿ ಅವರು ಕಳೆದ ಮೂರು ದಶಕಗಳಿಂದ ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಇವರು ದಿ. ವೀರಶೈವ ಅರ್ಬನ್ ಕ್ರೇಡಿಟ ಸೌಹಾರ್ದ ಸಹಕಾರಿ ನಿ. ಬೆಳಗಾವಿಯ ನಿರ್ದೇಶಕರಾಗಿದ್ದರು.

ಸಂತಾಪ: ಡಿ.ಎಲ್.ಕುಲಕರ್ಣಿ ಅವರು ನಿಧಾನಕ್ಕೆ ದಿ. ವೀರಶೈವ ಅರ್ಬನ್ ಕ್ರೇಡಿಟ ಸೌಹಾರ್ದ ಸಹಕಾರಿ ನಿ. ಬೆಳಗಾವಿಯ ಸಂಸ್ಥಾಪಕರು , ಅಧ್ಯಕ್ಷರು,  ಎಲ್ಲ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ದುಃಖ ವ್ಯಕ್ತಪಡಿಸಿದ್ದಾರೆ.

ದೇವರು ಮ್ರೃತರ ಆತ್ಮಕ್ಕೆ ಚಿರ ಶಾಂತಿಯನ್ನು ನೀಡಲಿ. ಇವರು ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

 

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -