Saturday, October 23, 2021

ಬೀದರ್ ಜಿಲ್ಲಾ ಸಾಹಿತಿಗಳ ಪರಿಚಯ

Must Read
- Advertisement -

ಮಹನಿಯರೆ !
ನಮಸ್ಕಾರಗಳು.
ಬೀದರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಲೇಖಕರ ಕುರಿತು ಮಚ್ಚೇಂದ್ರ ಪಿ ಅಣಕಲ್ ಅವರು ಬರೆದಿರುವ, ಲಕ್ಷ್ಮೀಕಾಂತ ಪ್ರಕಾಶನದ ವತಿಯಿಂದ ಪ್ರಕಟವಾಗುತ್ತಿರುವ ‘ಬೀದರ ಜಿಲ್ಲಾ ಸಾಹಿತ್ಯ ಕೋಶ’ ಎಂಬ ಹಿರಿ-ಕಿರಿಯ ಕವಿ, ಸಾಹಿತಿ, ಲೇಖಕರ ಪರಿಚಯಾತ್ಮಕ ಪುಸ್ತಕವೊಂದು ಹೊರ ತರಲಾಗುತ್ತಿದ್ದು. ಈ ಕೃತಿಯಲ್ಲಿ ಸುಮಾರು ನಾಲ್ಕು ನೂರುಕಿಂತ ಹೆಚ್ಚು ಲೇಖಕರ ವ್ಯಕ್ತಿ ಚಿತ್ರಣಗಳು ಒಳಗೊಂಡಿವೆ. ಈ ಪುಸ್ತಕದಲ್ಲಿರುವ ಬೀದರ್ ಜಿಲ್ಲಾ ಲೇಖಕರ ಪರಿಚಯವುಳ್ಳ ಬರಹಗಳನ್ನು ನಮ್ಮ ಹಸಿರು ಕ್ರಾಂತಿ ದಿನ ಪತ್ರಿಕೆಯಲ್ಲಿ ನಾಳೆಯಿಂದ ಅಂಕಣ ಬರಹ ಪ್ರಕಟವಾಗುವುದು.

‘ಬೀದರ ಜಿಲ್ಲೆಯ ಸಾಹಿತ್ಯ ಕೋಶ’ ಲೇಖಕರ ಪರಿಚಯ :
ಮಚ್ಚೇಂದ್ರ ಪಿ ಅಣಕಲ್ ಇವರು ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದವರು. ಇವರು ಈಗ ಕಲಬುರಗಿ ನಿವಾಸಿಯಾಗಿದ್ದಾರೆ. ಸದ್ಯ ಇವರು ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರು.

- Advertisement -

ಇವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಂ.ಎ (ಕನ್ನಡ) ಎಂ.ಇಡಿ. ಪದವೀಧರರು ಆಗಿ ಕೆಲ ವರ್ಷ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ, ಫೋಟೋಗ್ರಾಫರಾಗಿ ಸೇವೆ ಸಲ್ಲಿಸಿದ್ದಾರೆ.

- Advertisement -

ಇವರ ಕತೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ತುಷಾರ,ಕರ್ಮವೀರ ಸಂಯುಕ್ತ ಕರ್ನಾಟಕ, ಉದಯವಾಣಿ, ಮುಂಬೈಯ ಕರ್ನಾಟಕ ಮಲ್ಲ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಾಗೂ 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ ’ಲಾಟರಿ’ಕತೆ ಬಹುಮಾನ ಪಡೆದಿದೆ. ಮತ್ತು 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ ’ಡಾಂಬಾರು ದಂಧೆ’ ಕತೆ ಬಹುಮಾನ ಪಡೆದು ’ದೀಪಾತೊರಿದೆಡೆಗೆ’ ಎಂಬ ಕಥಾ ಸಂಕಲನದಲ್ಲಿ ಪ್ರಕಟಗೊಂಡಿದೆ.

2012 ರಲ್ಲಿ ಬೆಳಗಾವಿಯಲ್ಲಿ ನಡೆದ 4ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಇವರ ’ ಮೊದಲ ಗಿರಾಕಿ ’ ಕಥಾ ಸಂಕಲನಕ್ಕೆ ಉತ್ತಮ ಕಥಾ ಪುಸ್ತಕ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಆಕಾಶವಾಣಿ ದೂರದರ್ಶನ ಸೇರಿದಂತೆ ನಾಡಿನ ಹಲವಾರು ಕಡೆಗಳಲ್ಲಿ ಇವರ ಕತೆ ಕವನಗಳು ಪ್ರಕಟವಾಗಿವೆ.
ಅಷ್ಟೇಯಲ್ಲದೆ ಇವರಿಗೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಮಠದಿಂದ 2007 ರಿಂದ ಪ್ರತಿವರ್ಷ ಕೊಡಲ್ಪಡುತ್ತಿರುವ ರಾಜ್ಯಮಟ್ಟದ ’ ಉರಿಲಿಂಗ ಪೆದ್ದಿ ಪ್ರಶಸ್ತಿ ’ಯ ಪುರಸ್ಕಾರ ಪಡೆದವರಲ್ಲಿ ಇವರು ಮೊದಲಿಗರಾಗಿದ್ದಾರೆ.

ಇವರು ಬರೆದ ಕೃತಿಗಳು
1. ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು ( ಕವನಸಂಕಲನ)
2. ಜ್ಞಾನ ಸೂರ್ಯ ( ಸಂಪಾದಿತ ಕಾವ್ಯ )
3. ಜನಪದ ವೈದ್ಯರ ಕೈಪಿಡಿ ( ಸಂಪಾದನೆ)
4. ಲಾಟರಿ (ಕಥಾಸಂಕಲನ)
5. ಮೊದಲ ಗಿರಾಕಿ ( ಕಥಾಸಂಕಲನ)
5. ಹಗಲುಗಳ್ಳರು ( ಕಥಾಸಂಕಲನ)
ಪ್ರಕಟಿಸಿ ಜನಮನ್ನಣೆ ಪಡೆದಿದ್ದಾರೆ.
ಇವರ ಸಾಹಿತ್ಯ ಕುರಿತು ಹಲವಾರು ಪಿ.ಎಚ್.ಡಿ ಪ್ರಬಂಧಗಳು ರಚನೆಯಾಗಿವೆ.
ಈಗಾಗಲೇ ಇವರ ಉತ್ತಮ ಕತೆಗಳನ್ನು ಆಯ್ದು ಭಾಲ್ಕಿಯ
ರಾಜೇಂದ್ರ ಎಲ್. ಗೋಖಲೆಯವರು
’ ಮಚ್ಚೇಂದ್ರ ಅಣಕಲ್ ಅವರ ದಲಿತ ಸಂವೇದನೆಯ ಕತೆಗಳು ’ ಎಂಬ ಸಂಪಾದನೆ ಕೃತಿ ಹೊರ ತರುತ್ತಿದ್ದಾರೆ.
ಇವರು ’ಬೀದರ ಜಿಲ್ಲೆಯ ಸಾಹಿತ್ಯ ಕೋಶ ’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸುವ ಕಾರ್ಯ ಮಾಡುತ್ತಿದ್ದಾರೆ.
ಹೀಗೆ ಇವರ ಸಾಹಿತ್ಯ ಕೃಷಿ ಮುಂದುವರೆಯಲೆಂದು ಹಾರೈಸೋಣ.

  • ಸಂಪಾದಕರು
- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -