Friday, October 22, 2021

ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು : ಬೆಳಗಾವಿಯಲ್ಲಿ 927 ಹೊಸ ಸೋಂಕಿನ ಪ್ರಕರಣ ಪತ್ತೆ

Must Read
- Advertisement -

ಬೆಳಗಾವಿ ಮೇ., 05- ರಾಜ್ಯದಲ್ಲಿಂದು ಒಂದೇ ದಿನದಲ್ಲಿ 50112 ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿಯಲ್ಲಿಂದು 927 ಜನರಿಗೆ ಕೊರೊನಾ ಸೋಂಕು ತಗುಲಿದ್ದು ವರದಿಯಾಗಿದೆ.

ರಾಜ್ಯದಲ್ಲಿ ಇಂದು 50 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿರುವುದು ರಾಜ್ಯದಲ್ಲಿಯ ಕೊರೊನಾ ಅರ್ಭಟ ಮುಂದುವರೆದಿದ್ದನ್ನು ತೋರಿಸುತ್ತದೆ. ಕೇವಲ ರಾಜ್ಯ ರಾಜಧಾನಿಯಲ್ಲಿ ಅಬ್ಬರಿಸುತ್ತಿದ್ದ ಕೊರೊನಾ ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬೆರಿಯುತ್ತಿದೆ. ರಾಜ್ಯದಲ್ಲಿ ಕೊರೊನಾ ಸಕ್ರೀಯ ಪ್ರಕರಣಗಳ ಸಂಖ್ಯೆ 4,87,288ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ 346 ಜನರು ಕೊರೊನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಕೊರೊನಾಗೆ ಬಲಿಯಾದವರ ಸಂಖ್ಯೆ 16884ಕ್ಕೆ ಏರಿಕೆಯಾಗಿದೆ.

- Advertisement -

ಇಂದು ಬಾಗಲಕೋಟೆಯಲ್ಲಿ 719, ಬಳ್ಳಾರಿಯಲ್ಲಿ 927, ಬೆಳಗಾವಿಯಲ್ಲಿ 920, ಧಾರವಾಡದಲ್ಲಿ 1030, ಗದಗ 189, ಕಲಬುರ್ಗಿಯಲ್ಲಿ 1097, ಕೊಪ್ಪಳ 182, ವಿಜಯಪೂರದಲ್ಲಿ 513 ಜನರಿಗೆ ಕರೊನಾ ಸೋಂಕು ತಗುಲಿದೆ.

- Advertisement -

ಇಂದು ಬಾಗಲಕೋಟೆಯಲ್ಲಿ 3, ಬಳ್ಳಾರಿಯಲ್ಲಿ 19, ಬೆಳಗಾವಿಯಲ್ಲಿ 2, ಧಾರವಾಡದಲ್ಲಿ 8, ಗದಗ 3, ಕಲಬುರ್ಗಿಯಲ್ಲಿ 15, ವಿಜಯಪೂರದಲ್ಲಿ 4 ಜನ ಕರೊನಾಗೆ ಬಲಿಯಾಗಿದ್ದಾರೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -