Friday, October 22, 2021

ಕಷ್ಟ ಕಾಲದಲ್ಲಿ ಸುಕೋ ಬ್ಯಾಂಕ್‍ನ ಸೇವೆ ಶ್ಲಾಘನೀಯ : ಲಕ್ಷ್ಮಣ ಸವದಿ

Must Read
- Advertisement -

ಬಳ್ಳಾರಿ, ಮೇ. 05;ಕರೋನಾಕಷ್ಟಕಾಲದಲ್ಲಿ ಸೂಕ್ತವಾದ ನಿರ್ಣಯವನ್ನುಕೈಗೊಂಡು ನಮ್ಮಜನರಿಗೆ ನೆರವಾಗಿ ಜೀವವನ್ನು ಉಳಿಸಲು ಸುಕೋ ಬ್ಯಾಂಕ್ ಸಿಂಧನೂರು ಪಟ್ಟಣದಲ್ಲಿ ಐಎಂಎ ಮತ್ತು ಜನತಾ ಸೌಹಾರ್ದ ಸಹಕಾರಿಜೊತೆ ಸುಸಜ್ಜಿತವಾದ ಆಸ್ಪತ್ರೆಯನ್ನು ಪ್ರಾರಂಭ ಮಾಡುತ್ತಿರುವುದು ಶ್ಲಾಘನೀಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಿಂದ ಬುಧವಾರ ಆನ್‍ಲೈನ್‍ನಲ್ಲಿ ಈ ವಿಷೇಷ ಕೋವಿಡ್‍ಆಸ್ಪತ್ರೆಯನ್ನು ಉದ್ಘಾಟನೆ ನೆರವೇರಿಸಿ, ಮಾತನಾಡಿದ ಅವರು, ಸುಕೋ ಬ್ಯಾಂಕ್‍ನ ಆಡಳಿತ ಮಂಡಲಿ ಸದಸ್ಯರು, ಭಾರತೀಯ ವೈದ್ಯಕೀಯ ಮಂಡಲಿ ವೈದ್ಯರುಗಳು ಮತ್ತುಜನತಾ ಸೌಹಾರ್ದ ಸಹಕಾರಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

- Advertisement -

ಕೋವಿಡ್ ಸೋಂಕಿತರಿಗೆರಾಜ್ಯದಲ್ಲಿ ಪ್ರಸ್ತುತ ಬೆಡ್‍ಗಳ ಕೊರತೆ, ಚಿಕಿತ್ಸೆಯ ಸಮಸ್ಯೆ, ಆಕ್ಸಿಜನ್ ಪೂರೈಕೆ ಸೇರಿ ಅನೇಕ ಸಮಸ್ಯೆಗಳು ವ್ಯಾಪಕವಾಗಿ ಇರುವಾಗ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸುಕೋ ಬ್ಯಾಂಕ್ ಅನೇಕ ಜೀವರಕ್ಷಣೆಯ ಸಂಕಲ್ಪದೊಂದಿಗೆ ಕೋವಿಡ್ ಆಸ್ಪತ್ರೆ ಪ್ರಾರಂಭಿಸಿರುವುದು ಬ್ಯಾಂಕ್‍ನ ಜನಪರವಾದ ಚಿಂತನೆ ಮತ್ತು ಕಾಳಜಿಗೆ ಸಾಕ್ಷಿಎಂದರು.

- Advertisement -

ಸರ್ಕಾರ ನಿಗದಿ ಮಾಡಿರುವ ಶುಲ್ಕಕ್ಕಿಂತಲೂ ಶೇ.50ಕ್ಕಿಂತಲೂ ಕಡಿಮೆ ಶುಲ್ಕವನ್ನು ಪಡೆಯುವ ಮೂಲಕ ಜನಸೇವೆಗೆ ಸುಕೋ ಬ್ಯಾಂಕ್, ಐಎಂಎ ಮತ್ತುಜನತಾ ಸೌಹಾರ್ದ ಸಹಕಾರಿ ಮುಂದಾಗಿರುವುದು ಮಹತ್ವದ ವಿಚಾರ. ವಿಶೇಷವಾದ ಸಾಂದ್ರಿತ ಆಕ್ಸಿಜನ್ ಯಂತ್ರಗಳ ವ್ಯವಸ್ಥೆಯೊಂದಿಗೆ ಈ ಆಸ್ಪತ್ರೆ ಪ್ರಾರಂಭವಾಗಿರುವುದು ಅಭಿನಂದನಾರ್ಹ ಎಂದರು.

ಸುಕೋ ಬ್ಯಾಂಕ್‍ನ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ, ಅಧ್ಯಕ್ಷ ಮೋಹಿತ್ ಮಸ್ಕಿ ಅವರಜನಸೇವೆ, ಜನಪರ ಬದ್ಧತೆಗೆ ಈ ಆಸ್ಪತ್ರೆ ಸಾಕ್ಷಿಯಾಗಿದೆ.ಕರೋನಾಕಷ್ಟಕಾಲದಲ್ಲಿ ವೈದ್ಯರು ಸೇವೆಗೆ ಮುಂದಾಗಿರುವುದು ನಿಜಕ್ಕೂಅವರೆಲ್ಲರ ವೃತ್ತಿ ಬದ್ಧತೆಯನ್ನುತೋರುತ್ತದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕ ವೆಂಕಟರಾವ್ ನಾಡಗೌಡಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, `ಸುಕೋ – ಐಎಂಎ ಕೋವಿಡ್‍ಆಸ್ಪತ್ರೆ’ಗೆಅಗತ್ಯವಿರುವಆಕ್ಸಿಜನ್‍ಅನ್ನುಗಿಣಿಗೇರಾದಿಂದತ್ವರಿತವಾಗಿ ತುಂಬಿಸಿಕೊಂಡು ಸುಕೋ ಆಸ್ಪತ್ರೆಗೆತಲುಪಿಸಲು ಬ್ಯಾಂಕ್ ಸ್ವಂತದ ವಾಹನದ ವ್ಯವಸ್ಥೆ ಮಾಡಿಕೊಂಡಿದೆ.ಅಲ್ಲದೇ, ಇಲ್ಲಿಯೇಆಕ್ಸಿಜನ್‍ಉತ್ಪಾದನೆ ಮಾಡಿಕೊಳ್ಳಲು ಯಂತ್ರಗಳನ್ನು ಅಳವಡಿಸಲಾಗಿದ್ದು, ಈ ಆಸ್ಪತ್ರೆಯಲ್ಲಿಆಕ್ಸಿಜನ್‍ನಕೊರತೆಉಂಟಾಗುವುದಿಲ್ಲ ಎಂದರು.

ಡಾ. ಶಿವರಾಜ ಪಾಟೀಲ್‍ಅವರು ಮಾತನಾಡಿ, 30 ಹಾಸಿಗೆಗಳ ಸಂಪೂರ್ಣ ಸುಸಜ್ಜಿತವಾದಕೋವಿಡ್‍ಆಸ್ಪತ್ರೆಯನ್ನು ಸುಕೋ ಬ್ಯಾಂಕ್‍ನ ನೆರವಿನಿಂದ ಪ್ರಾರಂಭಿಸಲಾಗದೆ.ದಿನಕ್ಕೆ ಓರ್ವ ವೈದ್ಯರಂತೆಎಲ್ಲಾ ದಿನಗಳಲ್ಲಿ ಓರ್ವ ವೈದ್ಯ ದಿನವಿಡೀಕರ್ತವ್ಯ ನಿರ್ವಹಿಸುವರು.ನುರಿತ, ತಜ್ಞ ಮತ್ತುಅನುಭವಿ ನರ್ಸ್‍ಗಳು ಸೋಂಕಿತರ ಶುಶ್ರೂಷೆ ಮಾಡಲಿದ್ದಾರೆ.ಸೋಂಕಿತರಿಗೆಯಾವುದೇ ಸಮಸ್ಯೆಆಗದಂತೆಉಪಹಾರ, ಊಟದ ವ್ಯವಸ್ಥೆ ಮಾಡಲಾಗುತ್ತದೆ.ಸೋಂಕಿನ ಲಕ್ಷಣರಹಿತ ಮತ್ತು ಸೋಂಕಿತರಿಗೆ ಮಾತ್ರ ಈ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತದೆ.ನಿರಂತರಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಈ ಆಸ್ಪತ್ರೆಯಲ್ಲಿ ಲಭ್ಯವಿದೆಎಂದರು.

ಸುಕೊ ಬ್ಯಾಂಕ್‍ನಅಧ್ಯಕ್ಷ ಮೋಹಿತ್ ಮಸ್ಕಿ ಅವರು ಸ್ವಾಗತಕೋರಿ, ಕಲ್ಯಾಣಕರ್ನಾಟಕ ಪ್ರದೇಶದಲ್ಲಿ ಪ್ರಪ್ರಥಮವಾಗಿ ಸಹಕಾರಿಕ್ಷೇತ್ರದಲ್ಲಿ ಸುಸಜ್ಜಿತವಾದ, ಹವಾನಿಯಂತ್ರಿತ `ಸುಕೋ – ಐಎಂಎ ಕೋವಿಡ್‍ಆಸ್ಪತ್ರೆ’ ಪ್ರಾರಂಭವಾಗಿದೆ ಎಂದರು.

ಸುಕೋ ಬ್ಯಾಂಕ್‍ನಅಧ್ಯಕ್ಷ ಮೋಹಿತ್ ಮಸ್ಕಿ ಅವರುಕಾರ್ಯಕ್ರಮ ನಿರ್ವಹಿಸಿದರು.ಜನತಾ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಅವರು ವಂದನಾರ್ಪಣೆ ಸಲ್ಲಿಸಿದರು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -