Friday, October 22, 2021

“ನಾಳೆಯಿಂದ ಅಥಣಿ ಪಟ್ಟಣ ಸಂಪೂರ್ಣ ಲಾಕಡೌನ್”

Must Read
- Advertisement -

ಅಥಣಿ: ಪಟ್ಟಣದಲ್ಲಿ ಹದ್ದು ಮಿರುತ್ತಿರುವ ಸಾಂಕ್ರಾಮಿಕ ರೋಗದಿಂದಾಗಿ ಕೋವಿಡ್ ಪೆಸೆಂಟ್ ಹೆಚ್ಚುತ್ತಿರುವ ಕಾರಣ ಆಕ್ಸೀಜನ್ ಉಳ್ಳ ೧೦೦ ರಿಂದ ೧೨೦ ಹಾಸಿಗೆ ಇರುವ ಕೋವಿಡ್ ಸೆಂಟರ್ ಆದಷ್ಟು ಬೇಗ ತೆಗೆಯುವಂತೆ ಶಾಸಕ ಮಹೇಶ ಕುಮಠಳ್ಳಿ ತಾಲೂಕಾ ಆಡಳಿತಕ್ಕೆ ಆದೇಶವನ್ನು ಮಾಡಿದರು.

ಅವರು ಅಥಣಿ ನೀರಿಕ್ಷಣಾ ಮಂದಿರದಲ್ಲಿ ತಮ್ಮ ನೇತೃತ್ವದಲ್ಲಿ ಹಾಗೂ ಬೆಳಗಾವಿ ಎಸ್.ಪಿ. ಲಕ್ಷ್ಮಣ ನಿಂಬರಗಿ ಹಾಗೂ ಸಿ.ಇ.ಓ. ಡಾ.ದರ್ಶನ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ  ಮಾತನಾಡಿ, ಜನರ ಜೀವದ ಜೋತೆ ಯಾರು ಕೂಡಾ ಚಲ್ಲಾಟ ಆಡಬೇಡಿ, ಅವರ ಆರೋಗ್ಯಕ್ಕಾಗಿ ನಾವು ಕಠಿಣ ಕ್ರಮಕ್ಕೆ ಮುಂದಾಗವುದು ಅನಿವಾರ್ಯವಾಗಿದೆ. ಯಾರು ಬಿದಿಗಿಳಿಯದಂತೆ ಸಾರ್ವಜನಕರಲ್ಲಿ ಮನವಿ ಮಾಡಿಕೊಂಡು, ಕೋವಿಡ್ ಲಸಿಕೆ ಮತ್ತು ರೆಮಿಡೇಸಿವರ ಲಸಿಕೆ ಕೋರತೆ ಆಗದಂತೆ ನೋಡಿಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

- Advertisement -

ಅಥಣಿ ಸಾರ್ವಜನಿಕ ಆಸ್ಪತ್ರೇಗೆ ಆಕ್ಸಿಜನ್ ಅವಶ್ಯಕತೆ ಉಳ್ಳ ರೋಗಿಗಳು ಬರುವ ಸಂಖ್ಯೆ ಹೆಚ್ಚುತ್ತಾ ಇದೆ. ಇಂತಹ ರೋಗಿಗಳಿಗೆ ಆಕ್ಸೀಜನ್ ಕಡಿಮೆ ಬಿಳದಂತೆ ಸ್ಥಳಿಯ ಸಕ್ಕರೆ ಕಾರ್ಖಾನೆಗಳ ನೇರವನ್ನು ಪಡೆಯಬೇಕು, ವ್ಯಾಪಾರಸ್ಥರ ವಿಶ್ವಾಸವನ್ನು ಪಡೆದು ಅವರಿಗೆ ಒಂದು ವಾರದ ಮಟ್ಟಿಗೆ ಪರ್ಯಾಯ ವೇವಸ್ಥೆ ಕಲ್ಪಿಸಲು ಸೂಚಿಸಿದರು, ಹೋಮ ಆಷ್ಯೂಲೇಷನದಲ್ಲಿರುವವರನ್ನು ಯಾವುದೇ ರೀತಿ ಹೋರ ಬರದಂತೆ ನಿಗಾ ವಹಿಸಬೇಕು, ಸಾಮಾಜೀಕ ಅಂತರಕ್ಕೆ ಹೆಚ್ಚಿನ ಗಮನ ಹರೆಸಿ, ಸಮುದಾಯಕ್ಕೆ ಹರಡದಂತೆ ಕೊರೊನಾ ಹರಡದಂತೆ ಎಚ್ಚರವನ್ನು ವಹಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.

- Advertisement -

ಇದೇ ವೇಳೆ ಬೆಳಗಾವಿ ಜಿಲ್ಲಾ ಎಸ್.ಪಿ. ಲಕ್ಷ್ಮಣ ನಿಂಬರಗಿ ಮಾತನಾಡಿ, ಇನ್ನೂರಕ್ಕು ಹೆಚ್ಚು  ಕೊರೊನಾ ಪೆಸೆಂಟಗಳು ಬಂದರು ಅವುಗಳನ್ನು ನಿಭಾಯಿಸುವತಹ ಸಿದ್ದತೆಯಲ್ಲಿರುವಂತೆ ತಾಲೂಕಾ ಆಡಳಿತಕ್ಕೆ ಸೂಚಿಸಿದರು, ಕೋವಿಡ್ ನೆಮಗಳನ್ನು ಮುರಿಯುವವರ ಮೇಲೆ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಬೇಕು, ಕಾರಣ ಇಲ್ಲದೆ ಓಡಾಡುವವರ ಮೇಲೆ, ಬಿದಿಗಿಳಿದ ವಾಹನಗಳ ಮೇಲೆ ಕಠಿಣ ಕ್ರಮ ಕೈಕೊಂಡು ಪ್ರಕರಣ ದಾಖಲು ಮಾಡಿ, ಯಾರು ಕೂಡಾ ಬಿದಿಗಿಳಿಯದಂತೆ ಮತ್ತು ಬೈಕ್ ಸಿಂಜ್ ಮಾಡಿ ಲಾಕ್ ಡೌನ್ ಮುಗಿವರಿಗು ಬೈಕ್ ನೀಡಬಾರದು ಎಂದು ಎಸ್.ಪಿ ಲಕ್ಷ್ಮಣ ನಿಂಬರಗಿ ಅಥಣಿ ಪೋಲಿಸರಿಗೆ ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲಾ ಸಿಇಓ ಡಾ.ದರ್ಶನ ಮಾತನಾಡಿ, ಈ ಭಾರಿ ಕೊರೊನಾ ನೀರಿಕ್ಷಿತ ಮಿರಿ ಬರುತ್ತಿದ್ದು ಇದನ್ನು ನಿಯಂತ್ರಣ ಮಾಡಲು ಹೆಚ್ಚಿನ ಮಾನವ ಶಕ್ತಿ ಅವಶ್ಯವಾಗಿದೆ, ಇದಕ್ಕಾಗಿ ತಾಲೂಕಾ ಆಡಳಿತ ಮತ್ತು ತಾಲೂಕಾ ಪಂಚಾಯತ ಅಧಿಕಾರಿಗಳು ಆಶಾ ಕಾರ್ಯಕರ್ತರು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಪಡೆದುಕೊಳ್ಳಬೇಕು, ಕೋವಿಡ್ ಸೆಂಟರ್, ೨೪*೭ ಕಾಲ್ ಸೆಂಟರ್, ಸರಕಾರಿ ಆಸ್ಪತ್ರೆಯಲ್ಲಿ ಮುಂಜಾಗೃತಿ ಕ್ರಮ ತೆಗೆದುಕೊಳ್ಳಬೇಕು. ಅವಶ್ಯ ವಿದ್ದಾಗ ಮಾತ್ರ ಕೋವಿಡ್ ಪೆಸೆಂಟನ್ನು ಭಿಮ್ಸಗೆ ಕಳೆಸವಂತೆ ತಿಳಿಸಿದರು. ಈ ವೇಳೆ ತಹಶಿಲ್ದಾರ ದುಡ್ಡಪ್ಪ ಕೊಮ್ಮಾರ, ಕಾಗವಾಡ ತಹಶಿಲ್ದಾರ ಪ್ರಮೀಳಾ ದೇಶಪಾಂಡೆ, ತಾಪಂ ಅಧಿಕಾರಿ ರವಿ ಬಂಗಾರಪ್ಪನವರ, ಡಿವೈಎಸ್ಪಿ ಎಸ.ವಿ ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡರ, ಮಹಾದೇವ ಬಿರಾದಾರ,  ಡಾ. ಬಿ.ಜಿ ಕಾಗೆ, ಕವಲಾಪುರ, ಈರಣ್ಣ ವಾಲಿ, ಪ್ರವೀಣ ಪಾಟೀಲ, ಪಿಎಸ್ಐ ಕುಮಾರ ಹಾಡಕಾರ, ಅಶೋಕ ಕಾಂಬಳೆ,

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -