Saturday, October 23, 2021

ಮಕ್ಕಳಿಗೆ ಆಟದ ಮೈದಾನವಾದ ಮುಖ್ಯ ರಸ್ತೆಗಳು

Must Read
- Advertisement -

ಇಳಕಲ್ ಮೇ.,4- ರಾಜ್ಯಾದ್ಯಂತ ಜಾರಿ ಯಲ್ಲಿರುವ ಜನತಾ ಕಫ್ರ್ಯೂ ಕಾರಣ ದಿಂದಾಗಿ ಇಳಕಲ್ ನಗರದ ಮುಖ್ಯ ರಸ್ತೆಗಳೆಲ್ಲಾ ಮಕ್ಕಳಿಗೆ ಆಟದ ಆಡುಂಬೋಳಗಳಾಗಿವೆ. ಸೋಮವಾರವೂ ಸಂತೆಯ ದಿನವಾಗಿದ್ದು ಸಾಮಾನ್ಯವಾಗಿ ಈ ರಸ್ತೆಗಳೆಲ್ಲ ಬೀದಿ ವ್ಯಾಪಾರಿಗಳು ಹಾಗೂ ವಾಹನಸಂಚಾರದಿಂದ ಜನನಿಬಿಡ ವಾಗಿರುತ್ತವೆ. ಆದರೆ ಕಫ್ರ್ಯೂ ಕಾರಣಕ್ಕಾಗಿ ಬಿಕೋ ಎನ್ನುತ್ತಿರುವ ರಸ್ತೆಗಳನ್ನು ಆಕ್ರಮಿಸಿಕೊಂಡ ಮಕ್ಕಳು ಮೈದಾನಗಳನ್ನಾಗಿ ಮಾಡಿಕೊಂಡಿದ್ದಾರೆ.

ಪೋಲಿಸರು ಸೈರನ್ ಹಾಕುತ್ತಾ ಒಂದು ರೌಂಡ್ ತಿರುಗಿದರೆ ಸಾಕು ರಸ್ತೆಗಳು ಖಾಲಿ ಖಾಲಿಯಾಗುತ್ತವೆ. ಆದರೆ ಮಕ್ಕಳಿಗೆ ಮನೆಯಲ್ಲಿರಲು ಸಾಧ್ಯವೆ? ಎರಡೇ ನಿಮಿಷದಲ್ಲಿ ಅವೆಲ್ಲ ರೋಡಿಗೆ ಬಂದುಬಿಡುತ್ತವೆ. ಒಬ್ಬ ಬ್ಯಾಟು ತರುತ್ತಾನೆ ಮತ್ತೊಬ್ಬ ಬಾಲು ಹತ್ತಿರದಲ್ಲಿರುವ ಯಾರದೋ ಮನೆಯ ಕಟ್ಟಿಗೆಯ ತುಂಡುಗಳು ಸ್ಟಂಪ್ ಆಗುತ್ತವೆ. ಆಟ ಶುರು ಇಂಥ ವಿಪರೀತ ಸಮಯದಲ್ಲೂ ಮಕ್ಕಳು ತಮ್ಮನ್ನು ತಾವೇ ಮರೆತು ಆಟವಾಡುವುದನ್ನು ನೋಡಿದವರಿಗೆ ತಾವೂ ಮಕ್ಕಳಾಗಬೇಕು ಎನ್ನಿಸದಿರಲಾರದು. ಅರಪೂರವಾಗಿ ಯಾವು ದಾದರೊಂದು ಬಂದಾಗ ಎಲ್ಲ ಮಕ್ಕಳೂ ಏಕಕಾಲಕ್ಕೆ ಪಕ್ಕಕ್ಕೆ ಸರಿದು ದಾರಿಮಾಡಿ ಕೊಡುತ್ತವೆ. ವಾಹನ ಹೋದ ಕೂಡಲೇ ಮತ್ತೇ ಬಾಲ್ ಬ್ಯಾಟ್ ಆಟ ಶುರು. ಶಾಲೆಯಿಲ್ಲ ಹೋಂವರ್ಕ್‍ಇಲ್ಲ, ಪರೀಕ್ಷೆಗಳಿಲ್ಲ, ಆದರೂ ಎಲ್ಲರೂ ಪಾಸು, ಇಡೀ ದಿನ ಆಟವೇ ಆಟ.

- Advertisement -

ರಸ್ತೆಯಲ್ಲಿ ಆಡುವ ವಿಷಯದಲ್ಲಿ ಹುಡುಗಿಯರೂ ಹಿಂದೆ ಬಿದ್ದಿಲ. ಲಗೋರಿ, ಕುಂಟಾ, ಚಕಾ ಆಟ, ಇನ್ನೂ ಕೆಲವರು ತಾವೇನೂ ಕಡಿಮೆ ಇಲ್ಲ ಎಂಬಂತೆ ಕ್ರಿಕೆಟ್‍ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

- Advertisement -

ಬೇಸಿಗೆಯ ಧಗೆ ಕೂಡಾ ಜನರನ್ನು ಹೊರಗೆ ಬರದಂತೆ ತಡೆದಿದೆ. ಹೀಗಾಗಿ ಮಕ್ಕಳಿಗೆ ರಸ್ತೆಗಳು ಆತಂಕರಹಿತವಾಗಿವೆ. ಆದರೆ ಸಿಮೆಂಟ್ ರಸ್ತೆಗಳು ಬಿರು ಬಿಸಿಲಿಗೆ ಕಾಯ್ದು ವಿಪರೀತ ತಾಪ ಬಿಡುಗಡೆಯಾಗ ತೊಡಗಿದೆ.

ಆಟವಾಡಲು ಮಕ್ಕಳಿಗೆ ಅನುವು ಮಾಡಿಕೊಟ್ಟರೂ ನೈರ್ಮಲ್ಯ, ಅಂತರ ಕಾಯ್ದುಕೊಂಡು ಆಡುವ ಬಗ್ಗೆ ತಿಳುವಳಿಕೆ ಹಾಗೂ ಸ್ಯಾನಿಟೈಜರ್ ಬಳಕೆಗಳ ಬಗ್ಗೆ ಸರಿಯಾದ ಮಾರ್ಗದರ್ಶನ ಮಾಡಬೇಕಾದ ಹೊಣೆಗಾರಿಕೆ ಈಗ ಹಿರಿಯರ ಮೇಲಿದೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -